ಕನ್ನಡ ಕಲಿ-ನಲಿ: ಅಕ್ಷರಭ್ಯಾಸ ಪುಟಗಳು ಹಾಗೂ ಮಾಹಿತಿ
ಸೂಚನೆ: ಅಕ್ಷರ ಅಭ್ಯಾಸದ ಪುಟಗಳಿಗಾಗಿ ಆಯಾ ಅಕ್ಷರವನ್ನು ಕ್ಲಿಕ್ ಮಾಡಿ
(Click on alphabet to view respective page or right click to save)
ಸ್ವರಗಳು
ಅ ಆ ಇ ಈ ಉ ಊ ಋ
ಎ ಏ ಐ ಒ ಓ ಔ ಅಂ ಅಃ
ವ್ಯಂಜನಗಳು
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
ಹೆತ್ತವರಲ್ಲಿ ಹಾಗೂ ಹಿರಿಯರಲ್ಲಿ ಮನವಿ,
ಮಾತೃಭಾಷೆಯ ಮಹತ್ವವನ್ನು ಮುದ್ದಿನ ಮಕ್ಕಳಲ್ಲಿ ಮನವರಿಕೆ ಮಾಡಿಕೊಡಬೇಕಾದ ಮುಂದಾಲೋಚನೆಯ ಮನಸ್ಸು ಹಾಗೂ ಮಹದಾಸೆಯಿದ್ದಾಗ. ಅದರ ಜೊತೆಗೆ ಮಕ್ಕಳಲ್ಲಿ ಕೂಡ ಕಲಿಯುವ ಆಸಕ್ತಿ ಅತಿಯಾಗಿದ್ದಾಗ, ಕನ್ನಡ ಕಲಿಸುವ ಪ್ರಯತ್ನ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಅಂಥಹ ಸಂದರ್ಭಗಳಲ್ಲಿ ಕಲಿಕೆ ಸರಾಗವಾದೀತು ಮತ್ತು ಕಲಿಕೆಯ ಕೆಲಸ ಆನಂದ ತಂದೀತು. ಈ ಕಲಿಕೆಯ ಪ್ರಯಾಣದಲ್ಲಿ ಪ್ರಥಮವಾಗಿ ಮಕ್ಕಳಲ್ಲಿ ಮಾಡಿಸಬೇಕಾದ್ದು ಅಕ್ಷರಾಭ್ಯಾಸ. ಅದಕ್ಕೆಂದೇ, ಇಲ್ಲಿ ಕೆಳಗೆ ಕನ್ನಡ ವರ್ಣಮಾಲೆಯ ಎಲ್ಲಾ ಅಕ್ಷರಗಳನ್ನು ತಿದ್ದಿ ಕಲಿಯಲು ಅನುಕೂಲವಾಗುವಂತೆ ಮುದ್ರಿಸಿ ಕೊಡಲಾಗಿದೆ. ಇಲ್ಲಿನ ಎಲ್ಲಾ ಪುಟಗಳನ್ನೂ ಡೌನ್‍ಲೋಡ್ ಮಾಡಿಕೊಂಡು, ಮನೆಯಲ್ಲಿ ಬಿಡುವಿನ ವೇಳೆಯಲ್ಲಿ ಕಲಿಯಬಹುದಾಗಿದೆ.
ಪೋಷಕರೇ, ಮಕ್ಕಳಿಗೆ ಈ ಮನವಿಯನ್ನು ತಿಳಿಸಿ
ವಿದ್ಯೆಯೇ ಬಾಳಿನ ಬೆಳಕು. ಅಜ್ಞಾನವೇ ಅಂಧಕಾರ. ಉತ್ತಮ ಪ್ರಜೆಯಾಗಿ ಬಾಳುವುದೇ ಸರ್ವ ಶ್ರೇಷ್ಟ ಸಾಧನೆ. ತಾಯಿ, ತಾಯಿನಾಡು, ತಾಯಿಭಾಷೆಯನ್ನು ಪ್ರೀತಿಸುವುದು, ಗೌರವಿಸುವುದು ನಮ್ಮೆಲ್ಲರ ಪ್ರಪ್ರಥಮ ಕರ್ತವ್ಯವಾಗಿರಬೇಕು. ಸೇವಾ ಮನೋಭಾವ ನಮ್ಮೆಲ್ಲರ ಗುರಿಯಾಗಿರಬೇಕು. ಪ್ರತಿಫಲಾಪೇಕ್ಷೆಯಿಲ್ಲದೆ ಏನನ್ನಾದರೂ ಮಾಡಬಲ್ಲೆನೆಂಬ ನಂಬಿಕೆ ಅಚಲವಾಗಿರಬೇಕು. ನಾವೂ ಸುಖಿಸುವುದರ ಜೊತೆಗೆ, ಸಾಧ್ಯವಾದಲ್ಲಿ ಸುಖವನ್ನು ಹಂಚಿ ಆನಂದಿಸಬೇಕು. ಭವಿಷ್ಯದ ಪ್ರಜೆಗಳು ನೀವು. ನೀವು ನಮ್ಮಿಂದ, ನಮ್ಮ ಹಿರಿಯರಿಂದ ಸಾಧ್ಯವಾಗದ್ದನ್ನು ಸಾಧಿಸಬಲ್ಲವರಾಗಿದ್ದೀರಿ. ನಿಮ್ಮ ಉತ್ತಮ ಸಾಧನೆಗಳು ಜನ, ಜಗ ಮೆಚ್ಚುವಂತಿರಲಿ.