ಆರೋಹಣ


ಪ್ರೇಮ ಪರ್ವತಾರೋಹಣ
ಮಾಡೇ ಹೊರಡೋಣ
ಎದೆಯ ಭಾವಗಳ ಬಾವುಟ
ಅಲ್ಲೇ ಚಿತ್ರಿಸಿ ಹಾರಿಸೋಣ
ನೆನಪಿಗಿರಲೊಂದು ಸಂಪುಟ
ಮುದ್ರಿಸಿ ಇಟ್ಟುಕೊಳ್ಳೋಣ!


ಏರುವಾದಿಯಲಿ ಕಾಡಿವೆ
ಹಾಡೋ ಹಕ್ಕಿಗಳು, ಗೂಡಿವೆ
ಹುಲಿ-ಚಿರತೆ ಸಿಂಹಾದಿ
ವಿಷಜಂತು ಕಾದಿವೆ
ಏನೇ ಎದುರಾಗಲಿ, ಗುರಿ-
ಬಿಡದ ದಾರಿ ಹಿಡಿಯೋಣ!


ಅಲ್ಲಿ ಹರಿವ ಜಲಪಾತದಲಿ
ಹಳತ ಕೊಳೆ ತಳ ಸೇರಲಿ
ಜಗವ ಮರೆತು, ಜನರ ಹೊರತು
ಹೊಸತು ಬಾಳನು ಬಿತ್ತೋಣ
ಎಷ್ಟು ಬೇಕಷ್ಟರಲ್ಲಿ, ಹೇಗೆ
ಬದುಕುವುದೆಂದು ತಿಳಿಸೋಣ!

You may also like...

Leave a Reply