ವಿರಕ್ತ ಭಾವದಲಿ
ನಿಶ್ಯಬ್ಧದೆಡೆಗೆ
ನಿರ್ದಿಷ್ಟ ಗುರಿಯಿಲ್ಲದೆ ನಿಂತು
ಯೋಚಿಸಿದರೇನು ಬಂತು
ಗುರಿಯಿಲ್ಲದ ಬಾಳು
ದೊರೆಯಿಲ್ಲದ ನಾಡು
ಎಂಬಂಥಹ ಈ ಸ್ಥಿತಿಯಲ್ಲಿ
ನಗಬಾರದೆಂದೆನಿಸಿದರೂ
ನಗುತಾನಂದದಲಿ
ಅಳಬೇಕೆನಿಸಿದರೂ
ಅಳಲಾಗದ ನೋವಿನಲಿ
ಎಷ್ಟು ದಿನ ಹೀಗೇ
ಕಾಲ ಕಳೆಯಲಿ?
ಕಣ್ಣು ಮುಚ್ಚಿ ಕ್ಷಣವೊಮ್ಮೆ
ನಿಶ್ಚಿಂತೆಯಲಿ
ಎಲ್ಲವನ್ನೂ ಮರೆತು,
ಎಲ್ಲರನ್ನೂ ತೊರೆದು,
ಎಲ್ಲರಿದ್ದರೂ ಯಾರಿರದೇ,
ಎಲ್ಲೆ ಮೀರಲೂ ಕೈಲಾಗದೇ
ಎಲ್ಲೋ ಮುಖಮಾಡಿ ನಿಂತ
ನನ್ನ ದಯನೀಯ ಗತಿ ಕಂಡು
ಕೇಳದಿದ್ದವರೆಲ್ಲಾ ಕೇಳುವ
ಹೇಳಲಾಗದಿದ್ದವರೆಲ್ಲಾ
ಬುದ್ಧಿ ಹೇಳುವ ಆ ದಿನ
ಬರುವ ಮೊದಲೇ
ಪ್ರಶಾಂತತೆಯತ್ತ ದಿಟ್ಟಿನೆಟ್ಟು
ಮುಂದೆ ಹೋಗಲೇ?