Monthly Archive: February 2024
ಗಾನ ಸರಸ್ವತಿ ವಾಣಿಜಯರಾಂ ಧ್ವನಿ ಜೀವಜಲ, ಅದು ಒತ್ತಡದ ಬದುಕಿಗೊಂದು ಸಿಧ್ದೌಷಧಿ, ನೊಂದ ಮನಸ್ಸುಗಳಿಗೆ ಮುದನೀಡವ ಮಂದಾನಿಲ, ದಿನದ ಬಾಧೆಗಳೆಲ್ಲವನ್ನೂ ಮರೆಸಿ ಮಲಗಿಸುವ ಜೋಗುಳ. ನಾನು ವಾಣಿಜಯರಾಂ ಹಾಡಿರುವ ಕನ್ನಡ ಚಲನ ಚಿತ್ರ ಗೀತೆ, ಭಾವಗೀತೆ ಹಾಗೂ ಭಕ್ತಿಗೀತೆಗಳೆಲ್ಲವನ್ನು ಬಹುಪಾಲು ಕೇಳಿ ಮೈ-ಮನ ತುಂಬಿಸಿಕೊಂಡಿದ್ದೇನೆ. ಜೊತೆಗೆ, ಅವರ ಹಿಂದೀ ಹಾಡುಗಳು, ಗಜಲ್ಗಳು, ಭಜನ್ಗಳು, ಸಂಸ್ಕೃತ ಶ್ಲೋಕಗಳು ಎಲ್ಲವನ್ನೂ ಅಕ್ಷರಾದಿಯಾಗಿ ಆನಂದಿಸಿದ್ದೇನೆ. ಪ್ರತಿಯೊಂದು ಹಾಡಿನಲ್ಲೂ ಅವರು ಭಾಷೆಯನ್ನು ಬಳಸುವ ರೀತಿ, ಭಾವ...
ತೀರಾ ಇತ್ತೀಚೆಗೆ ಅಂದರೆ “ರಂಗೀತರಂಗ” ಹಾಗು “ಬಾಹುಬಲಿ” ಎಂಬ ಕನ್ನಡದ ಹಾಗು ಒಂದು ರೀತಿಯಲ್ಲಿ ಕನ್ನಡಿಗರನ್ನೊಳಗೊಂಡಿರುವ ತೆಲುಗಿನ ಚಿತ್ರಗಳು ಚಿತ್ರಮಂದಿರಕ್ಕಾಗಿ ನಡೆಸಿದ ಪೈಪೋಟಿಯನ್ನು ಕರ್ನಾಟಕದ ಜನ ವಿಶಾಲವಾದ ತೆರೆಯ ಮೇಲೆಯೇ ವೀಕ್ಷಿಸಿದ್ದಾಯಿತು. ಒಂದು ಅತೀ ದೊಡ್ಡ ಬಜೆಟ್ಟಿನ, ಅತೀ ದೊಡ್ಡ ಜನಗಳ ಬೆಂಬಲದಿಂದ ನಿರಾಯಾಸವಾಗಿ ಕನ್ನಡನಾಡಿನಲ್ಲಿ ಬಿಡುಗಡೆಯಾದ ತೆಲುಗಿನವರ ಚಿತ್ರ. ಇನ್ನೊಂದು ಹೊಸಬರ, ಹೊಸತನದ ಹಣೆಪಟ್ಟಿಯೊತ್ತು, ಪ್ರೇಕ್ಷಕನಲ್ಲಿ ಹೊಸ ಭರವಸೆ ಹುಟ್ಟಿಸಿಲೇಬೆಕೆಂಬ ಹಂಬಲ ಹೊತ್ತು ಕನ್ನಡಿಗರ ನಾಡಿನಲ್ಲಿ ನಿಲ್ಲಲು ಹೆಣಗಾಡಿದ...