ದಂಡನೆ (ಕರ್ಮವೀರದಲ್ಲಿ ಪ್ರಕಟಿತ ಕತೆ)
ಮನುಷ್ಯ ಯಾವುದಾದರೊಂದು ಹವ್ಯಾಸಕ್ಕೆ ಅಧೀನನಾಗಿರುತ್ತಾನೆಂದು ಭಾವಿಸಿದಂತಿದ್ದ ಹರೀಶನಿಗೆ ತನ್ನ ಬಗ್ಗೆ ಮಾತ್ರ ಆ ನಂಬಿಕೆ ಇರಲಿಲ್ಲ. ಬಡ ಮಾಸ್ತರರೊಬ್ಬರ ಏಕೈಕ ಪುತ್ರನಾಗಿದ್ದ ಹರೀಶ ಹಲವಾರು ಆದರ್ಶಗಳನ್ನು ಮೈಗೂಡಿಸಿಕೊಂಡೇ ಬೆಳೆದವನಾಗಿದ್ದನು. ತಂದೆಯ ಶಿಸ್ತಿಗೆ ತಕ್ಕಂಥ ಮಗನೆಂದೇ ಆತ ಎಲ್ಲಾ ಪರಿಚಿತರಿಂದಲೂ ಹೊಗಳಿಸಿಕೊಳ್ಳುತ್ತಿದ್ದ. ಓದುವುದರಲ್ಲೂ ತನ್ನ ಆಸಾಧಾರಣತೆಯನ್ನು ಅಭಿವ್ಯಕ್ತಿಸುತ್ತಿದ್ದ ಹರೀಶ ಎಲ್ಲರಿಗೂ ತುಂಬಾ ಅಚ್ಚು-ಮೆಚ್ಚಿನವನಾಗಿಯೂ ಇದ್ದ. “ಮುಂದೆ ಏನಾದರೊಂದು ಸಾಧಿಸಿಯೇ ತೀರುತ್ತೇನೆ” ಎಂಬಂಥ ಆಶಾವಾದದ ಮಾತುಗಳನ್ನಾಡುತ್ತಿದ್ದ ಮಗನ ಭವಿಷ್ಯ ನೆನೆನೆನೆದು ಹೆತ್ತವರು ಆಗ್ಗಾಗ್ಗೆ...