ಅಭಾಗಿನಿ
ವಿಶಾಲವಾದ ಕಾರೀಡಾರಿನ ಗೋಡೆ ಮಗ್ಗುಲಿನಲ್ಲಿ ಸಾಲು ಬೆಂಚುಗಳನ್ನು ಒಪ್ಪವಾಗಿ ಜೋಡಿಸಲಾಗಿದ್ದ “ಜೀವಾ” ನರ್ಸಿಂಗ್ ಹೋಂ ಅಂದೂ ಕೂಡ ಯಾರೂ ಇಲ್ಲದೆ ಭಣಗುಡುತ್ತಿತ್ತು. ಸಂಜೆಯ ಸೆರಗಿನೊಳಗೆ ಬಹು ಬೇಗನೆ ಜಾರಿಕೊಳ್ಳುತ್ತಿದ್ದ ಇತ್ತೀಚಿನ ದಿನಗಳಲ್ಲಂತೂ ಗಿರಾಕಿಗಳಿಲ್ಲದೇ ಖಾಲಿಹೊಡೆಯುತ್ತಿದ್ದುದ್ದರಿಂದ ತನ್ನ ಪ್ರಸಿದ್ಧಿ, ಪ್ರಭಾವ, ಪಾಂಡಿತ್ಯಗಳೆಲ್ಲಾ ತೀರಾ ತಗ್ಗಿಹೋಗಿವೆಯೆಂದೂ, ಬಹುಕಾಲದಿಂದಲೂ ಜನಗಳನ್ನು ವಂಚಿಸುತ್ತಿದ್ದ ಹಿಕಮತ್ತು ವಗೈರೆಗಳೆಲ್ಲಾ ಉಡುಗಿಹೋಗುತ್ತಿವೆಯೆಂದೂ ಭಾವಿಸಿಕೊಂಡು ಭವಿಷ್ಯದ ತಾಕಲಾಟದಲ್ಲಿ ತಡವರಿಸುತ್ತಾ ಕುಳಿತಿದ್ದ ಗೈನಾಕಾಲಜಿಸ್ಟ್‌ಗೆ ಅಸಾಮಿಯೊಬ್ಬನ ಜೊತೆ ಒಳಬಂದ ನರ್ಸ್‍ಗಳಿಬ್ಬರನ್ನು ಕಂಡು ಆನಂದಾಶ್ಚರ್ಯಗಳೆರಡೂ ಒಟ್ಟಿಗೆ...