ವಿರಕ್ತ ಭಾವದಲಿ
ನಿಶ್ಯಬ್ಧದೆಡೆಗೆನಿರ್ದಿಷ್ಟ ಗುರಿಯಿಲ್ಲದೆ ನಿಂತುಯೋಚಿಸಿದರೇನು ಬಂತುಗುರಿಯಿಲ್ಲದ ಬಾಳುದೊರೆಯಿಲ್ಲದ ನಾಡುಎಂಬಂಥಹ ಈ ಸ್ಥಿತಿಯಲ್ಲಿನಗಬಾರದೆಂದೆನಿಸಿದರೂನಗುತಾನಂದದಲಿಅಳಬೇಕೆನಿಸಿದರೂಅಳಲಾಗದ ನೋವಿನಲಿಎಷ್ಟು ದಿನ ಹೀಗೇಕಾಲ ಕಳೆಯಲಿ? ಕಣ್ಣು ಮುಚ್ಚಿ ಕ್ಷಣವೊಮ್ಮೆನಿಶ್ಚಿಂತೆಯಲಿಎಲ್ಲವನ್ನೂ ಮರೆತು,ಎಲ್ಲರನ್ನೂ ತೊರೆದು,ಎಲ್ಲರಿದ್ದರೂ ಯಾರಿರದೇ,ಎಲ್ಲೆ ಮೀರಲೂ ಕೈಲಾಗದೇಎಲ್ಲೋ ಮುಖಮಾಡಿ ನಿಂತನನ್ನ ದಯನೀಯ ಗತಿ ಕಂಡುಕೇಳದಿದ್ದವರೆಲ್ಲಾ ಕೇಳುವಹೇಳಲಾಗದಿದ್ದವರೆಲ್ಲಾಬುದ್ಧಿ ಹೇಳುವ ಆ ದಿನಬರುವ ಮೊದಲೇಪ್ರಶಾಂತತೆಯತ್ತ ದಿಟ್ಟಿನೆಟ್ಟುಮುಂದೆ ಹೋಗಲೇ?