ನಾನೇಕೆ ಡೈರಿ ಬರೆಯುತ್ತೇನೆ?
ನಾನು ಎಷ್ಟೋ ಸಾರಿ ದಿನಚರಿ ಬರೆಯುವುದರ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದೆ. ನಮ್ಮ ಮನಸ್ಸಿನಂತರ್ಭಾವಗಳನ್ನು ತೆರೆದಿಡುವುದರಲ್ಲಿ ತಪ್ಪಾದರೂ ಏನಿದೆ? ಮಡುಗಟ್ಟಿದಂತಿರುವ ನಮ್ಮ ಜೀವನೋತ್ಸಾಹಗಳನ್ನು ಕೆರಳಿಸಲು ಇದೊಂದು ಸಫಲ ಪ್ರಯತ್ನವೇ ಸರಿ. ಅದಕ್ಕೆಂದೇ ನಾವುಗಳು ನಮ್ಮ ಅಕೃತ್ಯಗಳನ್ನೂ ಪ್ರಾಮಾಣಿಕವಾಗಿ ದಾಖಲಿಸಬೇಕಾಗುತ್ತದೆ. ಇದರಿಂದ ನಮ್ಮ ನೆನಪಿಗೂ ಮೀರಿದದೆಷ್ಟೋ ಸತ್ಯಗಳು ನಂತರದ ದಿನಗಳಲ್ಲಿ ನೆನಪಿಗೆ ಬರುತ್ತವೆ. ಆಗ ನಾವು ನಮ್ಮ ಹಿಂದಿನ ಸ್ಥಿತಿ-ಗತಿಗಳ ತುಲನೆ ಮಾಡಲು ಕಾರ್ಯಮಗ್ನರಾಗುತ್ತೇವೆ. ಕಾಲದಡಿಯಲ್ಲಿ ಅದೃಶ್ಯವಾಗಿದ್ದ ಬಾಲ್ಯ, ಯೌವ್ವನ ಅಥವಾ ವೃದ್ಧಾಪ್ಯದ...